ಸುಳ್ಳಿನ ಕೋಟೆ
ಈ ಸಂಭಾಷಣೆ
ಕಹಿಯಿದೆ
ಯಾರಿಗೂ ಕಾಣದ
ಮಸಿ ಚುಕ್ಕಿ
ಇನ್ನೂ ಉಳಿದಿದೆ
ಕಣ್ಣುಗಳು ಮುಚ್ಚಿದ್ದರೂ
ಸುಳ್ಳಿನ ಮುಳ್ಳು
ಚುಚ್ಚುತಿದೆ.
ಸಂದರ್ಭ ಸಿಲುಕಿದೆ
ಸುಳ್ಳಿನ ಸುಳಿಯಲಿ
ಸೋತಿಹೆನು
ನಂಬಿದವರ ಮನದಲಿ
ಮನಸ್ಸು ಹಿಂಡಿದೆ,
ರಕ್ತ ಕಣ್ಣೀರು ಕಾದಿದೆ.
ಯಾರು ಕೇಳುವರು
ಈ ತುಸು ಕವಿಯ ಕೂಗನು
ಕಿವಿಗಳು ಕವಕವ ಅಗಿಹವು
ಪೋಷಕರ ಮಾಡುವ ಶೋಷಣೆ
ನೋಡಲು
ದೇವನೂ ಗಾಂಧಾರಿ
ಅಗಿಹನು.
ಹೌದು!
ಇದೆಲ್ಲ ಒಂದು ದೊಡ್ಡ ಸುಳ್ಳು
ಜಗವೆಲ್ಲ ಸೇರಿ
ನನ್ನನ್ನು ಮೌನ ಮಾಡಿಸಲು
ರಚಿಸಿದ ಒಂದು ವಿಸ್ತಾರವಾದ ಕೃತ್ಯ
ಇದೆ ಪರಮಸತ್ಯ
ಅಷ್ಟಕ್ಕೂ, ಕವಿತೆಯ ಅರ್ಥವೇನು?
ಪ್ರಾಸಬದ್ಧ
ಸುಳ್ಳಿನ ಕೋಟೆ
ಅಲ್ಲವೇ?
Comments